30 Nov'16

Valmiki Jayanti

ನಗರದ ಶ್ರೀ ಮಾತೆ ಮಾಣಿಕೇಶ್ವರಿ ಕಾಲೇಜಿನಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸುವುದು ಹೇಗೆ ಎಂಬ ವಿಷಯದ ಮೇಲೆ ನಡೆದ ವಿಶೇಷ ಉಪನ್ಯಾಸದಲ್ಲಿ ಶ್ರೀಮತಿ ಲೀಲಾ ಕಾರಟಗಿಯವರು ಮಾತನಾಡುತ್ತಾ ಇವತ್ತಿನ ಆಧುನಿಕ ಹಾಗೂ ಸ್ಪರ್ದಾತ್ಮಕ ಯುಗದಲ್ಲಿ ಯಶಸ್ಸು ಎನ್ನುವುದು ಸುಲಭವಾಗಿ ದೊರಕುವಂತದಲ್ಲ ಅಥವಾ ಖರಿದಿಗೋ ಸಿಗುವಂತದಲ್ಲ ನಿರಂತರ ಅವಿರತ ಪರಿಶ್ರಮವಿದ್ದಲ್ಲಿ ಮಾತ್ರ ಯಶಸ್ಸು ಸಿಗುತ್ತದೆ ಎಂದರು. ವಿಶೇಶವಾಗಿ ಯುವಶಕ್ತಿ ಮತ್ತು ವಿದ್ಯಾರ್ಥಿ ಜೀವನದಲ್ಲಿ ಸಮಯಕ್ಕೆ ಮಹತ್ವ ನೀಡಿ ಮುಂದುವರಿದಿದ್ದೆ ಆದಲ್ಲಿ ಅದರಲ್ಲು ಜೀವನದಲ್ಲಿ ಈ ಮೂರು ಅಂಶಗಳನ್ನು ತಾವಿರುವ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಮತ್ತು ವೃತ್ತಿಗೌರವ ಈ ಮೇಲಿನ ಮೂರು ಅಂಶಗಳನ್ನು ಅಳವಡಿಸಿಕೊಂಡಿದ್ದೆ ಆದರೆ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಯಾವುದೆ ರೀತಿಯ ಆಕರ್ಷಣೆಗಳಿಗೆ ಒಳಗಾಗದೆನೆ ತನ್ನ ಕಾಯಕದಲ್ಲಿ ಶೃದ್ದೆಯಿಂದ ಗೌರವಯುತವಾಗಿ ಬದುಕಿದರೆ ಮುಂಬರವ ದಿನಗಳಲ್ಲಿ ಸಮಾಜದ ಹಿತದ ದೃಷ್ಟಿಯಿಂದ ಒಳ್ಲೆಯ ಕೆಲಸ ಮಾಡಿದರೆ ಜನ ನಮ್ಮನ್ನು ಗೌರವಿಸುತ್ತಾರೆ ಮತ್ತು ಇವೆಲ್ಲವುಗಳ ಜೊತೆಗೆ ಮನುಷ್ಯನಾಗಿ ಜನಿಸಿದ ಮೇಲೆ ಸಾಮಾಜಿಕ ಮೌಲ್ಯಗಳಿನ್ನು ಗೌರವಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯದ್ಯಕ್ಷರಾದ ವೀರಕಪುತ್ರ ಶ್ರೀನಿವಾಸರವರು ಮಾತನಾಡುತ್ತಾ ಬಡತನ ಎನ್ನುವುದು ಮನುಷ್ಯನಗೆ ಮನುಷ್ಯ ಬಹಳ ದೊಡ್ಡ ಪಾಠ ಕಲಿಸುತ್ತದೆ,ಇದು ಕಲಿಸಿದಷ್ಟು ಪಾಠ ಬೇರಾವ ವಿಶ್ವವಿದ್ಯಾಲಯಗಳು ಕಲಿಸಿಕೊಡುವುದಿಲ್ಲ, ಬಡತನದ ಬೇಗೆಯಲ್ಲಿ ಬೇಳೆದವರೆ ಅಜರಾಮರವಾಗಿ ಉಳಿಯುತ್ತಾರೆ ಹಾಗೂ ತಾನೇಷ್ಟೇ ಎತ್ತರಕ್ಕೆ ಬೇಳೆದರೂ ತಾನೂ ಬೇಳೆದು ಬಂದಿರುವ ದಾರಿಯನ್ನು ಮರೆಯಬಾರದು, ಮಾನವೀಯತೆ ಮತ್ತು ಹೃದಯ ವೈಶಾಲ್ಯತೆ ಹೊಂದಿರಬೇಕು,ಇಂದಿನ ಕಾಲದಲ್ಲಿ ಎಷ್ಟೆ ಎತ್ತರಕ್ಕೆ ಬಳೇದರೂ ಅಹಂಕಾರ ಬರಬಾರದು ಒಂದು ವೇಳೆ ಅಹಂಕಾರವೆನ್ನುವುದು ಬಂದ್ದಿದ್ದೆ ಆದಲ್ಲಿ ಅದು ಮನುಷ್ಯನ ಅಸ್ತಿತ್ವವೇ ಇಲ್ಲದಂತೆ ಮಾಡುತ್ತದೆ ಎಂದರು ಸಮಾಜಲ್ಲಿ ಎಲ್ಲರನ್ನು ಗೌರವಯುತವಾಗಿ ಕಾಣಬೇಕು ಎಂದರು. ಅತಿಥಿಯಾಗಿ ಆಗಮಿಸಿದ ರೇವಣಸಿದ್ದಪ್ಪಾ ಜಲಾದೆಯವರು ಮಾತನಾಡುತ್ತಾ ವಿಕಾಸ ಅಕಾಡೆಮಿಯ ಅಡಿಯಲ್ಲಿ ಈ ರೀತಿಯ ಉಪನುಯಾಸ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ಹಮ್ಮಿಕೋಂಡ್ಡಿದ್ದವೆ, ನಾವು ಹಿಂದುಳಿದವರು ಎಂಬ ಭ್ರಮೆ ಹೋಗಬೇಕು ಬರುವ ದಿನಗಳಲ್ಲಿ ಈ ಭಾಗವನ್ನು ಹೈದ್ರಬಾದ್ ಕರ್ನಾಟಕ ಎನ್ನಬಾರದು “ಕಲ್ಯಾಣ ಕರ್ನಾಟಕ” ಎನ್ನಬೇಕು ಎಂದು ಹೇಳಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅದ್ಯಕ್ಷರಾದ ಶ್ರೀ ರಮೇಶ ಕುಲಕರ್ಣಿ ಯವರು ಮಾತನಾಡುತ್ತಾ ಈ ರೀತಿಯ ಉಪನ್ಯಾಸಗಳು ಇಂದಿನ ಯುವಕರಿಗೆ ಬಹಳ ಅತ್ಯವಶ್ಯಕ ಇವು ಮನುಷ್ಯನಿಗೆ ಜೀವನದ ಮೌಲ್ಯಗಳ ಮಹತ್ವವು ಕಲಿಸಿಕೊಡುತ್ತವೆ ಎಂದರು. ಆಡಳಿತಾಧಿಕಾರಿ ಗುರುನಾಥ ರಾಜಗೀರಾ ಹಾಗು ಉಪನ್ಯಾಸಕರು ,ವಿದ್ಯಾರ್ಥಿಗಳು ಇದ್ದರು.


28 Nov'16

Karnataka Rajyothsava

Karnataka Rajyothsava CELEBRATED in Shree Maate Manikeshwari PU College BIDAR.


15 Dec'15

Teachers Day

ನಗರದ ಶ್ರೀ ರಮೇಶ ಸರ್ ಮತ್ತು ಸುರೇಶ ಸರ್ ರವರ ಶ್ರೀ ಮಾತೆ ಮಾಣಿಕೇಶ್ವರಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.ವಿದ್ಯಾರ್ಥಿಗಳಿಂದ ಏಲ್ಲಾ ಶಿಕ್ಷಕರಿಗೆ ಆರತಿ ಬೆಳಗುವುದರ ಮೂಲಕ ಗೌರವ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಪತರ್ಕರ್ತರಾದ ಶ್ರೀ ಸದಾನಂದ ಜೋಶಿಯವರು ಮಾತಾನಾಡುತ್ತಾ ಶಿಕ್ಷಕರಿಗೆ ವಿದ್ಯಾರ್ಥಿಗಳು ಸನಾತನ ಧರ್ಮದ ಸಂಸ್ಕ್ರತಿಯಂತೆ ಆರತಿ ಬೆಳಗಿ ಗೌರವ ಸಲ್ಲಿಸಿರುವುದು ಬಹಳ ಹೆಮ್ಮೇಯ ವಿಷಯವಾಗಿದೆ ಈ ರೀತಿ ಪಾಠದ ಜೊತೆ ಜೊತೆಗೆನೆ ವಿವಿಧ ರಿತೀಯ ಸಾಂಸ್ಕ್ರತಿಕ ಚಟುವಟಿಗಳು ನಡೆಯುತ್ತಿರಬೇಕು ಇವು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ ಎಂದರು. ಈ ಸಂಧರ್ಬದಲ್ಲಿ ಸಂಸ್ಥೆಯ ಅದ್ಯಕ್ಷರಾದ ಶ್ರೀ ರಮೇಶ ಕುಲಕರ್ಣಿಯವರು ಮಾತನಾಡುತ್ತಾ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳನೆ ಮಹತ್ವದ್ದಾಗಿದೆ, ಶಿಕ್ಷಕರಾದವರು ತನ್ನ ವೃತ್ತಿಯನ್ನು ಅಪಾರವಾಗಿ ಗೌರವಿಸಬೇಕು ಓರ್ವ ಶಿಲ್ಪಿಯಾಗಿ ಸರಿಯಾದ ಮೂರ್ತಿಯನ್ನು ಕೆತ್ತನೆ ಮಾಡಿ ರಾಷ್ಟ್ರ ಸೇವೆಗೆ ಸಮರ್ಪಿಸಬೇಕು,ತಾನು ಮಾಡುವ ವೃತ್ತಿಗೆ ನಿಜವಾದ ನ್ಯಾಯವನ್ನು ಒದಗಿಸಿಕೊಡಬೇಕು ಎಂದರು. ಮತ್ತು ಎಲ್ಲಾ ವಿದ್ಯಾರ್ಥಿಗಳು ಜೀವನದುದ್ದಕ್ಕು ತನಗೆ ಮಾರ್ಗದರ್ಶನ ಮಾಡಿದ ಗುರುಗಳಿಗೆ ಗೌರವವನ್ನು ಸಲ್ಲಿಸಬೇಕು,ಮುಂದೆ ನಿಮ್ಮ ಜೀವನದಲ್ಲಿ ನೀವು ಸಲ್ಲಿಸುವ ಗೌರವನೆ ಶಿಕ್ಷಕರಿಗೆ ನೀಡುವ ಗುರುಕಾಣಿಕೆಯಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಸೇರಿ ತಮ್ಮ ತರಗತಿಗಳನ್ನು ಅಲಂಕರಿಸಿದ್ದರು, ಶಿಕ್ಷಕರಿಗೆ ಸಸಿಯನ್ನು ನೆನಪಿನ ಕಾಣಿಕೆಯಾಗಿ ನಿಡಿದ್ದು ಅವಿಸ್ಮರಣಿಯವಾದದ್ದು. ಈ ಸಂದರ್ಭದಲ್ಲಿ ಪ್ರಾಚಾಂiÀರ್iರು,ಆಡಳಿತಾಧಿಕಾರಿಗಳು,ಶಿಕ್ಷಕರು ಸೇರಿದಂತೆ ಪ್ರಥಮ ಹಾಗೂ ದೀತಿಯ ಪಿ.ಯು.ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರುಪಣೆಯನ್ನು ವಿದ್ಯಾರ್ಥಿಗಳಾದ ಸೌಂದರ್ಯ ಶೇಟಕಾರ, ಎಂ.ಪಿ ಕಣ್ಮಣಿ ನಿರುಪಿಸಿದರು,ಮುಬಿನಾ ಬೇಗಂ ವಂದಿಸಿದರು.

Notice

 • 2
  Apr

  Admissions

  Apr'18-Jul'18
  Book your Admissions Seat.
  * Limited Seats Only.

 • Update in Results Page.

 • 30
  Jan

  Time Table

  Will be updated Soon...

Bidar CITY # BidarTOUR # SPORTS # JOBS # EVENTS # Bidar ADS # SHOPPING # BidriWOOD